Saturday, November 22, 2008

ಕೆಲವು ಪಾಠಗಳು

  1. ಪಾಠ ಒಂದು- ಹಸಿವು ಮತ್ತು ಬಾಯಾರಿಕೆಯ ಹಾಗೆ ಕಾಮ ಕೂಡ.
  2. ಪಾಠ ಎರಡು- ಪ್ರೀತಿಗೆ ಮೂರು ಮುಖ. ಲಸ್ಟ್, ಅಟ್ರಾಕ್ಷನ್ ಮತ್ತು ಅಟ್ಯಾಚ್ ಮೆಂಟ್
  3. ಪಾಠ ಮೂರು - ಇತ್ತೀಚಿನ ಅಧ್ಯಯನದ ಪ್ರಕಾರ ಪ್ರೀತಿಯಲ್ಲಿ ಬಿದ್ದಾಗ ಮೆದುಳು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಫೆರೋಮೋನ್ಸ್, ಡೋಪಮೈನ್, ನಾರೆಪೈನ್ ಪ್ರೈನ್ ಮತ್ತು ಸೆರಾಟೊನಿನ್. ಇವು ಆಂಪಿಟಮೈನ್ಸ್ ಥರ ಮೆದುಳಿನ ಪ್ಲೆಷರ್ ಸೆಂಟರನ್ನು ಉದ್ದೀಪನಗೊಳಿಸುತ್ತೆ. ಅದರಿಂದಾಗಿ ಹೃದಯ ಬಡಿತ ಜಾಸ್ತಿಯಾಗುತ್ತೆ. ಹಸಿವು ಮಾಯ, ನಿದ್ದೆ ಬರೋದಿಲ್ಲ. ಸದಾ ಉದ್ವಿಗ್ನ ಮನಸ್ಥಿತಿ, ಒಂಥರಾ ಎಕ್ಸೈಟ್ ಮೆಂಟು.
  4. ಈ ಸ್ಥಿತಿ ಒಂದೂವರೆ ವರುಷದಿಂದ ಮೂರು ವರುಷದ ತನಕ ಇರುತ್ತದಂತೆ.
ಪಾಠ ಓದುವುದಕ್ಕೆ ಎಷ್ಟು ಸರಳ. ಅದೇ ಹೀಗಾದಾಗ ಎಂಥ ತಲ್ಲಣ. ಒಂದೂವರೆ ವರುಷದ ನಂತರ ಏನಾಗುತ್ತದೆ ಅಂತ ನಿಮಗೇನಾದರೂ ಗೊತ್ತಾ?

2 comments:

Anonymous said...

ಪ್ರೀತಿಗೆ ಇನ್ನೊಂದು ಮುಖ ಇದೆ. ಅದೇ sacrifice- ತ್ಯಾಗ.
ಚಿಕ್ಕದಾಗಿ ಚೊಕ್ಕದಾಗಿ ಬರಿತೀರಾ. ಒಳ್ಳೆ attempt.
keep writing
ಸುನೈನಾ

ಋಷ್ಯಶೃಂಗ said...

Thank u sunaina